ಜಿ.ಎಸ್.ಬಿ. ವೆಲ್ ಫೇರ್ ಅಸೋಶಿಯೇಶನ್(ರಿ) ಶ್ರೀ ಅನಂತ ನಗರ, ಬೆಂಗಳೂರು ಇವರ ಆಡಳಿತಕ್ಕೆ ಒಳಪಟ್ಟಿರುವ ಶ್ರೀ ವೆಂಕಟರಮಣ ದೇವಾಲಯದಲ್ಲಿ ಇರುವ ಅಶ್ವತ್ಥ ವೃಕ್ಷದ ಉಪನಯನ ಮತ್ತು ಮದುವೆ ದಿನಾಂಕ . 21-05-2011 ಮತ್ತು 22-05-2011 ಹೀಗೆ ಎರಡು ದಿನಗಳ ಕಾಲ ಶಾಸ್ತ್ರೋಕ್ತವಾಗಿ ಮತ್ತು ಧಾರ್ಮಿಕ ವಿಧಿ-ವಿಧಾನದಂತೆ ನೇರವೇರಿತು. ತತ್ಸಂಬಂಧವಾಗಿ ಪ್ರಾರ್ಥನ, ಹೋಮ, ಹವನ, ಅಭಿಷೇಕಗಳು, ವಿಶೇಷ ಅಲಂಕಾರ ಪೂಜೆ, ವಿಶೇಷ ನೈವೇಧ್ಯ, ಬ್ರಾಹ್ಮಣ, ಸುವಾಸಿನಿ, ದಂಪತಿ ಪೂಜಾ, ನವಗ್ರಹ ವಾಸ್ತು ಶಾಂತಿ, ಹವನ ಸೇವಾ, ಷೋಡಶ ಸಂಸ್ಕಾರ ಹವನ ಸೇವಾ, ಮಹಾ ಸಂತರ್ಪಣೆ ಆದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಂಗಳೂರಿನ ಎಲ್ಲಾ ಭಾಗಗಳಿಂದ ಅಧಿಕ ಸಂಖ್ಯೆಯ ಸಮಾಜ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪುನೀತರಾದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ