ಮಂಗಳವಾರ, ಜೂನ್ 21, 2011

ಅಂಕೋಲಾದಲ್ಲೊಂದು ವಿಶೇಷ ಗುರುವಂದನಾ

   
                   ದಿನಾಂಕ. 16-05-2011ರಂದು ಅಂಕೋಲೆಯ ದ್ವಿಭಾಷಾ ಸಾಹಿತಿ ಶ್ರೀ ಎನ್.ಬಿ.ಕಾಮತ್ ಇವರ ಮನೆಯಲ್ಲಿ ಬಿ.ಎ.ಬಿ.ಎಡ್.ವಿದ್ಯಾರ್ಥಿಗಳು ತಮಗೆ ಆಂಗ್ಲ ಭಾಷೆಯ ವ್ಯಾಕರಣವನ್ನು ಉಚಿತವಾಗಿ ಹೇಳಿಕೊಟ್ಟ ಸಲುವಾಗಿ ``ಬೀಳ್ಕೋಡುಗೆ'' ಸಮಾರಂಭದಲ್ಲಿ ವಿದ್ಯುತ್ ಅಲಂಕೃತ ಗಣಪತಿ ಪೋಟೊವನ್ನು ಅರ್ಪಿಸಿ ಗುರುದಂಪತಿಗಳ ಆಶೀರ್ವಾದ ಪಡೆದರು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನುಡಿಜೇನು ಸಾಪ್ತಾಹಿಕದ ಸಂಪಾದಕರಾದ ಶ್ರೀ ಬಿ. ಹೊನ್ನಪ್ಪ ಅವರು ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಅನುಭವಗಳನ್ನು ವಿವರಿಸಿ ಹಠತೊಟ್ಟು ತಮ್ಮ ಜೀವನದಲ್ಲಿ ಯಶ ಪಡೆಯಬೇಕೆಂದು ಕರೆ ಕೊಟ್ಟರು. ಇದೇ ವೇಳೆಯಲ್ಲಿ `ಗುರು'ಗಳಾದ ಶ್ರೀ ಎನ್.ಬಿ.ಕಾಮತ್ ಅವರು ಈ ತನಕ 560 ಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಗ್ಲೀಷ ವ್ಯಾಕರಣ ಕಲಿಸಿಕೊಟ್ಟಿದ್ದಕ್ಕಾಗಿ ಬೆಂಗಳೂರುನ ಪ್ರಸಿದ್ದ ಶಿಕ್ಷಣ ಸೇವಾ ಟ್ರಸ್ಟಿನವರು ಅವರಿಗೆ ``ಶಿಕ್ಷಣ ಸೇವಾರತ್ನ'' ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಹೇಳಿ ಈಗ 80ರ ಪ್ರಾಯದಲ್ಲಿಯೂ, ತಮ್ಮ ಅನಾರೋಗ್ಯ ಪರಿಸ್ಥಿತಿಯಲ್ಲಯೂ  ಈ ರೀತಿಯಲ್ಲಿ ಉಚಿತವಾಗಿ ಇಂಗ್ಲೀಷ ವ್ಯಾಕರಣ ಕಲಿಸಿ ಕೊಡುತ್ತಿರುವುದು ನಿಜವಾಗಿಯೂ ಪ್ರಶಂಸನೀಯ ಮತ್ತು ಆದರ್ಶಪ್ರಾಯ ಎಂದು ಶ್ಲಾಘಿಸಿದರು. ಶ್ರೀ ಎನ್.ಬಿ.ಕಾಮತರ ಪತ್ನಿ ಶ್ರೀಮತಿ ಕುಮುದಾ ಕಾಮತ್ ಅವರು ಧನ್ಯವಾದ ಅರ್ಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ