ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕವಳೇ ಮಠಾಧೀಶ ಶ್ರೀಮದ ಶಿವಾನಂದ ಸರಸ್ವತೀ ಸ್ವಾಮೀಜಿಯವರ ಚಾತುರ್ಮಾಸವು ಬ್ರಹ್ಮಾವರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ದಿನಾಂಕ. 15-07-2011ರಂದು ಆರಂಭವಾಗಿ 10-11-2011ರ ತನಕ ಜರುಗಲಿರುವದು. ತತ್ಸಂಬಂಧವಾಗಿ ಪ|ಪೂ|ಸ್ವಾಮೀಜಿಯವರು ತಾ. 9-7-2011ರಂದು ಬ್ರಹ್ಮಾವರಕ್ಕೆ ಆಗಮಿಸಲಿರುವರು. ಪ|ಪೂ| ಸ್ವಾಮೀಜಿಯವರ ಈ ವರ್ಷದ ಚಾತುರ್ಮಾಸ್ಯ ವೃತವನ್ನು ವಿಜೃಂಭಣೆಯಿಂದ ಆಚರಿಸಲು ಸಮಾಜ ಬಾಂಧವರೆಲ್ಲರೂ ತಮ್ಮ ತನು, ಮನ, ಧನದ ಸಹಾಯ-ಸಹಕಾರಗಳನ್ನು ನೀಡಬೇಕಾಗಿ ಕೋರಿಕೆ ಇದೆ. ಹೆಚ್ಚಿನ ಮಾಹಿತಿಗಾಗಿ ಚಾತುರ್ಮಾಸ ಸಮಿತಿ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಬ್ರಹ್ಮಾವರ, ಉಡುಪಿ ತಾ||, ಕರ್ನಾಟಕ ರಾಜ್ಯ ಅಥವಾ ದೂರವಾಣಿ 0984515085(ಶ್ರೀ ವಿಶ್ವನಾಥ ಪೈ) ಇವರನ್ನು ಸಂಪರ್ಕಿಸಿರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ