ಶನಿವಾರ, ಜೂನ್ 25, 2011

ಹುಬ್ಬಳ್ಳಿಯಲ್ಲಿ ಸಂಪೂರ್ಣ ರಾಮಾಯಣ ಕಥಾ ಕೀರ್ತನ

     ಹುಬ್ಬಳ್ಳಿಯ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ವೇ|ಮೂ| ಡಾ|| ಪವನ ಭಟ್ ಇವರಿಂದ ಸಮಾಜ ಮಂದಿರ ``ಸರಸ್ವತಿ ಸದನ''ದಲ್ಲಿ ``ಸಂಪೂರ್ಣ ರಾಮಾಯಣ ಕಥಾ ಕೀರ್ತನ ಸಪ್ತಾಹ''ವು ದಿನಾಂಕ. 14-08-2011ರಿಂದ 20-08-2011ರ ತನಕ ಆಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ತತ್ಸಂಬಂಧವಾಗಿ ಪ್ರತಿ ದಿನ ಮುಂಜಾನೆ ಪಾರಾಯಣ, ಪೂಜೆ ಮತ್ತು ಸಂಜೆ  ರಾಮರಕ್ಷಾ ಸ್ತೋತ್ರ ಪಠಣ, ಶ್ರೀ ರಾಮ ಜಪ ನಂತರ ಕೀರ್ತನೆಯು ಜರುಗಲಿದ್ದು ಹುಬ್ಬಳ್ಳಿ-ಧಾರವಾಡದ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗಿ ವಿನಂತಿ ಇದೆ.
*
     ಹುಬ್ಬಳ್ಳಿ ಗೌಡಸಾರಸ್ವತ ಬ್ರಾಹ್ಮಣ ಸಮಾಜಾದ 2010-11ನೇ ಸಾಲಿನ ``ಸರ್ವ ಸಾಧಾರಣ ಸಭೆಯು'' ದಿನಾಂಕ. 03-07-2011ರಂದು ಸಂಜೆ 5 ಗಂಟೆಗೆ ಸಮಾಜ ಮಂದಿರ ``ಸರಸ್ವತಿ ಸದನ''ದಲ್ಲಿ ನಡೆಯಲಿದೆ.
ಸಮಾಜ ಬಾಂಧವರೆಲ್ಲರೂ ಉಪಸ್ಥಿತರಿರಬೇಕಾಗಿ ಕೋರಿಕೆ.

     ಹುಬ್ಬಳ್ಳಿ ಗೌಡಸಾರಸ್ವತ ಬ್ರಾಹ್ಮಣ ಸಮಾಜಾದ `ಮಹಿಳಾ ವಿಭಾಗ'ದ 2010-11ನೇ ಸಾಲಿನ ``ಸರ್ವ ಸಾಧಾರಣ ಸಭೆಯು'' ದಿನಾಂಕ. 10 - 7-2011ರಂದು ಸಂಜೆ 5 ಗಂಟೆಗೆ ಸಮಾಜ ಮಂದಿರ ``ಸರಸ್ವತಿ ಸದನ''ದಲ್ಲಿ ನಡೆಯಲಿದೆ. ಮಹಿಳಾ ವಿಭಾಗದ ಸದಸ್ಯರೆಲ್ಲರೂ ಉಪಸ್ಥಿತರಿರಬೇಕಾಗಿ ಕೋರಿಕೆ.

ಬುಧವಾರ, ಜೂನ್ 22, 2011

ಬ್ರಹ್ಮಾವರದಲ್ಲಿ ಶ್ರೀ ಕವಳೇ ಮಠಾಧೀಶರ ಚಾತುರ್ಮಾಸ

     ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕವಳೇ ಮಠಾಧೀಶ ಶ್ರೀಮದ ಶಿವಾನಂದ ಸರಸ್ವತೀ ಸ್ವಾಮೀಜಿಯವರ ಚಾತುರ್ಮಾಸವು ಬ್ರಹ್ಮಾವರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ದಿನಾಂಕ. 15-07-2011ರಂದು ಆರಂಭವಾಗಿ 10-11-2011ರ ತನಕ ಜರುಗಲಿರುವದು. ತತ್ಸಂಬಂಧವಾಗಿ ಪ|ಪೂ|ಸ್ವಾಮೀಜಿಯವರು ತಾ. 9-7-2011ರಂದು ಬ್ರಹ್ಮಾವರಕ್ಕೆ ಆಗಮಿಸಲಿರುವರು. ಪ|ಪೂ| ಸ್ವಾಮೀಜಿಯವರ ಈ ವರ್ಷದ ಚಾತುರ್ಮಾಸ್ಯ ವೃತವನ್ನು ವಿಜೃಂಭಣೆಯಿಂದ ಆಚರಿಸಲು ಸಮಾಜ ಬಾಂಧವರೆಲ್ಲರೂ ತಮ್ಮ ತನು, ಮನ, ಧನದ ಸಹಾಯ-ಸಹಕಾರಗಳನ್ನು ನೀಡಬೇಕಾಗಿ ಕೋರಿಕೆ  ಇದೆ. ಹೆಚ್ಚಿನ ಮಾಹಿತಿಗಾಗಿ ಚಾತುರ್ಮಾಸ ಸಮಿತಿ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಬ್ರಹ್ಮಾವರ, ಉಡುಪಿ ತಾ||, ಕರ್ನಾಟಕ ರಾಜ್ಯ ಅಥವಾ ದೂರವಾಣಿ 0984515085(ಶ್ರೀ ವಿಶ್ವನಾಥ ಪೈ) ಇವರನ್ನು ಸಂಪರ್ಕಿಸಿರಿ

ಮಂಗಳವಾರ, ಜೂನ್ 21, 2011

ಶ್ರೀ ಗಾಯಿತ್ರಿದೇವಿ ಸಿದ್ಧಿವಿನಾಯಕ ದೇವಸ್ಥಾನ, ಮಂಗಳೂರು


     ಮಂಗಳೂರು ಪಂಚಮಹಾಶಕ್ತಿ ಶ್ರೀ ಗಾಯಿತ್ರಿ ದೇವಿ ಸಿದ್ಧಿವಿನಾಯಕ ದೇವಾಲಯದಲ್ಲಿ ದಿ. 24-04-2011ರಂದು ನಡೆದ ಶ್ರೀ ಮಹಾಶಕ್ತಿ ಶ್ರೀ ಗಾಯಿತ್ರಿ ಲಕ್ಷ ಜಪಯಾಗ ಮತ್ತು ವಿಶೇಷ ಹೂವಿನ ಪೂಜೆಯಲ್ಲಿ ದೈವಜ್ಞ ಬ್ರಾಹ್ಮಣ ಮಠಾಧೀಶರಾದ  ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾ ಸ್ವಾಮಿಯವರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರುಗಿತು. ಆ ದಿವಸ ದೇವಾಲಯದಲ್ಲಿ ಶ್ರೀ ಸೂರ್ಯಕಾಂತ ಶೇಟ್ ಇವರಿಗೆ ``ದೈವಜ್ಞ ಶ್ರಮ ರತ್ನ'' ಪ್ರಶಸ್ತಿ ನೀಡಿ ಗೌರವಿಸಿದರು.. ಮತ್ತು ಶ್ರೀ ಎಸ್. ರಮಾನಂದ ಶೇಟ್ ಇವರಿಗೂ ಅವರ ಸೇವೆಯನ್ನು ಪರಿಗಣಿಸಿ ಸನ್ಮಾನ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಎಂ. ರಮೇಶಕೃಷ್ಣ ಶೇಟ್, ಮೊಕ್ತೇಸರರಾದ ಶ್ರೀ ದೇವರಾಯ ಶೇಟ್ ಆದಿ ಗಣ್ಯರು ಉಪಸ್ಥಿತರಿದ್ದರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ದಾವಣಗೆರೆ

    ಈ ಹಿಂದಿನ ವರ್ಷಗಳಂತೆ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಈ ವರ್ಷವೂ ಸಹ 2010-11ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಪೂರ್ತಿ ಅಂಕ ಗಳಿಸಿದ ಪ್ರತಿಭಾವಂತ ಮಕ್ಕಳಿಗೆ ``ಕನ್ನಡ ಕೌಸ್ತುಭ'' ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ.ಶಾಂತಪ್ಪ ಪೂಜಾರಿಯವರು ತಿಳಿಸಿದ್ದಾರೆ.
     ಕರ್ನಾಟಕ ರಾಜ್ಯ ಮಟ್ಟದ ಈ ಪ್ರಶಸ್ತಿಗೆ ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಅಗಸ್ಟ್ ಮೊದಲ ವಾರದಲ್ಲಿ ದಾವಣಗೆರೆಯಲ್ಲಿ ಜರಗುವ ಅದ್ದೂರಿ ಸಮಾರಂಭದಲ್ಲಿ ರಾಜ್ಯದ ಗೌರವಾನ್ವಿತ ಸಾಹಿತ್ಯ ದಿಗ್ಗಜರಿಂದ ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡಲಾಗುವದು ಎಂದು ಅವರು ತಿಳಿಸಿದ್ದಾರೆ.
     ಹೆಚ್ಚಿನ ಮಾಹಿತಿ ಹಾಗೂ ನಿಗದಿತ ಅರ್ಜಿ ನಮೂನೆಗಾಗಿ ಸಾಲಿಗ್ರಾಮ ಗಣೇಶ ಶೆಣೈ, ಸಂಸ್ಥಾಪಕ, ಕಲಾಕುಂಚ, 431, ಕನ್ನಡ ಕೃಪಾ, ಕುವೆಂಪು ರಸ್ತೆ, ಕಸ್ತೂರಬಾ ಬಡಾವಣೆ, ದಾವಣಗೆರೆ -2. ಪೋನ್ : 08192- 270359, 9901122728 ಇಲ್ಲಿಗೆ ಸಂಪರ್ಕಸಿರಿ. ಅರ್ಜಿ ತಲುಪಲು ಕೊನೆಯ ದಿನಾಂಕ 30-06-2011

ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯ ತೀರ್ಥಹಳ್ಳಿ

     ತೀರ್ಥಹಳ್ಳಿಯ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ದ್ವೀತಿಯ ವರ್ಧಂತಿ ಉತ್ಸವವು ದಿ. 6-6-2011ರಂದು ಶ್ರೀ ದೇವತಾ ಪ್ರಾರ್ಥನೆ, ಪಂಚಾಮೃತಾಭಿಷೇಕ, ಶತಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ, ವರ್ಧನಿ ಕಲಶ, ಕನಕಾಭಿಷೇಕ, ಭಾಗೀರಥಿ ಅಭಿಷೇಕ, ಪ್ರಸನ್ನ ಪೂಜಾ, ಅಷ್ಟಮಂಗಲ ನಿರೀಕ್ಷಣ, ಮಹಾಪೂಜಾ, ಪಟ್ಟ ಕಾಣಿಕಾ, ಪ್ರಸಾದ ಪೂಜಾ, ಪ್ರಸಾದ ಗ್ರಹಣ, ಬ್ರಾಹ್ಮಣ, ಭೂರಿ ಸಂತರ್ಪಣ, ವಸಂತ ಪೂಜಾ ಆದಿ ಧಾರ್ಮಿಕ ಕಾರ್ಯಕ್ರಮ ಸಮೇತ ವಿಜೃಂಭಣೆಯಲ್ಲಿ ಜರುಗಿತು. ಊರ-ಪರಊರ ಅಪಾರ ಸಮಾಜ ಬಾಂಧವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಅಂಕೋಲಾದಲ್ಲೊಂದು ವಿಶೇಷ ಗುರುವಂದನಾ

   
                   ದಿನಾಂಕ. 16-05-2011ರಂದು ಅಂಕೋಲೆಯ ದ್ವಿಭಾಷಾ ಸಾಹಿತಿ ಶ್ರೀ ಎನ್.ಬಿ.ಕಾಮತ್ ಇವರ ಮನೆಯಲ್ಲಿ ಬಿ.ಎ.ಬಿ.ಎಡ್.ವಿದ್ಯಾರ್ಥಿಗಳು ತಮಗೆ ಆಂಗ್ಲ ಭಾಷೆಯ ವ್ಯಾಕರಣವನ್ನು ಉಚಿತವಾಗಿ ಹೇಳಿಕೊಟ್ಟ ಸಲುವಾಗಿ ``ಬೀಳ್ಕೋಡುಗೆ'' ಸಮಾರಂಭದಲ್ಲಿ ವಿದ್ಯುತ್ ಅಲಂಕೃತ ಗಣಪತಿ ಪೋಟೊವನ್ನು ಅರ್ಪಿಸಿ ಗುರುದಂಪತಿಗಳ ಆಶೀರ್ವಾದ ಪಡೆದರು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನುಡಿಜೇನು ಸಾಪ್ತಾಹಿಕದ ಸಂಪಾದಕರಾದ ಶ್ರೀ ಬಿ. ಹೊನ್ನಪ್ಪ ಅವರು ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಅನುಭವಗಳನ್ನು ವಿವರಿಸಿ ಹಠತೊಟ್ಟು ತಮ್ಮ ಜೀವನದಲ್ಲಿ ಯಶ ಪಡೆಯಬೇಕೆಂದು ಕರೆ ಕೊಟ್ಟರು. ಇದೇ ವೇಳೆಯಲ್ಲಿ `ಗುರು'ಗಳಾದ ಶ್ರೀ ಎನ್.ಬಿ.ಕಾಮತ್ ಅವರು ಈ ತನಕ 560 ಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಗ್ಲೀಷ ವ್ಯಾಕರಣ ಕಲಿಸಿಕೊಟ್ಟಿದ್ದಕ್ಕಾಗಿ ಬೆಂಗಳೂರುನ ಪ್ರಸಿದ್ದ ಶಿಕ್ಷಣ ಸೇವಾ ಟ್ರಸ್ಟಿನವರು ಅವರಿಗೆ ``ಶಿಕ್ಷಣ ಸೇವಾರತ್ನ'' ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಹೇಳಿ ಈಗ 80ರ ಪ್ರಾಯದಲ್ಲಿಯೂ, ತಮ್ಮ ಅನಾರೋಗ್ಯ ಪರಿಸ್ಥಿತಿಯಲ್ಲಯೂ  ಈ ರೀತಿಯಲ್ಲಿ ಉಚಿತವಾಗಿ ಇಂಗ್ಲೀಷ ವ್ಯಾಕರಣ ಕಲಿಸಿ ಕೊಡುತ್ತಿರುವುದು ನಿಜವಾಗಿಯೂ ಪ್ರಶಂಸನೀಯ ಮತ್ತು ಆದರ್ಶಪ್ರಾಯ ಎಂದು ಶ್ಲಾಘಿಸಿದರು. ಶ್ರೀ ಎನ್.ಬಿ.ಕಾಮತರ ಪತ್ನಿ ಶ್ರೀಮತಿ ಕುಮುದಾ ಕಾಮತ್ ಅವರು ಧನ್ಯವಾದ ಅರ್ಪಿಸಿದರು.

ಬೆಂಗ್ಳೂರು ಶ್ರೀ ವೆಂಕಟರಮಣ ದೇವಾಲಯದಲ್ಲಿ ಶ್ರೀ ಅಶ್ವತ್ಥ ವೃಕ್ಷಕ್ಕೆ ಮದುವೆ

     ಜಿ.ಎಸ್.ಬಿ. ವೆಲ್ ಫೇರ್ ಅಸೋಶಿಯೇಶನ್(ರಿ) ಶ್ರೀ ಅನಂತ ನಗರ, ಬೆಂಗಳೂರು ಇವರ ಆಡಳಿತಕ್ಕೆ ಒಳಪಟ್ಟಿರುವ ಶ್ರೀ ವೆಂಕಟರಮಣ ದೇವಾಲಯದಲ್ಲಿ ಇರುವ ಅಶ್ವತ್ಥ ವೃಕ್ಷದ ಉಪನಯನ ಮತ್ತು ಮದುವೆ ದಿನಾಂಕ . 21-05-2011 ಮತ್ತು 22-05-2011 ಹೀಗೆ ಎರಡು ದಿನಗಳ ಕಾಲ ಶಾಸ್ತ್ರೋಕ್ತವಾಗಿ ಮತ್ತು ಧಾರ್ಮಿಕ ವಿಧಿ-ವಿಧಾನದಂತೆ ನೇರವೇರಿತು. ತತ್ಸಂಬಂಧವಾಗಿ ಪ್ರಾರ್ಥನ, ಹೋಮ, ಹವನ, ಅಭಿಷೇಕಗಳು, ವಿಶೇಷ ಅಲಂಕಾರ ಪೂಜೆ, ವಿಶೇಷ ನೈವೇಧ್ಯ, ಬ್ರಾಹ್ಮಣ, ಸುವಾಸಿನಿ, ದಂಪತಿ ಪೂಜಾ, ನವಗ್ರಹ ವಾಸ್ತು ಶಾಂತಿ, ಹವನ ಸೇವಾ, ಷೋಡಶ ಸಂಸ್ಕಾರ ಹವನ ಸೇವಾ, ಮಹಾ ಸಂತರ್ಪಣೆ ಆದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಂಗಳೂರಿನ ಎಲ್ಲಾ ಭಾಗಗಳಿಂದ ಅಧಿಕ ಸಂಖ್ಯೆಯ ಸಮಾಜ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪುನೀತರಾದರು.

ಹುಬ್ಬಳ್ಳಿಯ ಕು|| ಶಿಲ್ಪಾ ಶ್ರೀಧರ ಭಟ್ ಸಾಧನೆ

     ಕೆನರಾ ಬ್ಯಾಂಕಿನಿಂದ ನಿವೃತ್ತರಾಗಿ ಜಿ.ಎಸ್.ಬಿ. ಸಮಾಜ ಬಾಂಧವರಿಗೆ ಉಚಿತವಾಗಿ ವೈವಾಹಿಕ ಸೇವೆ ನೀಡುತ್ತಿರುವ ಹುಬ್ಬಳ್ಳಿಯ ಶ್ರೀ ಶ್ರೀಧರ ವ್ಹಿ.ಭಟ್ ಮತ್ತು ಶ್ರೀಮತಿ ಸುಗಂಧಿ ಎಸ್. ಭಟ್ ರವರ ಮಗಳು ಕು|| ಶಿಲ್ಪಾ ಎಸ್. ಭಟ್ ಈಕೆ 2008-09ರ ಸಾಲಿನಲ್ಲಿ  ``ಮಹಿಳಾ ವಿಶ್ವವಿದ್ಯಾಲಯ ವಿಜಾಪುರ'' ಇವರು ನಡೆಸಿದ ಬಿಬಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ರೇಂಕ್ ಅನ್ನು ಬಂಗಾರದ(ಗೋಲ್ಡ್ ಮೆಡಲ್) ಪದಕದೊಂದಿಗೆ ಪಡೆದುಕೊಂಡಿದ್ದಾಳೆ. 12-04-2011ರಂದು ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಜರುಗಿದ ಒಂದು ಸಮಾರಂಭದಲ್ಲಿ ಕಾಲೇಜಿನ ವತಿಯಿಂದ ಶ್ರೀ ಅರವಿಂದ ಕುಬಸದ ಅವರು ಬಂಗಾರದ ಪದಕವನ್ನು ಕು| ಶಿಲ್ಪಾಳಿಗೆ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಕು|| ಶಿಲ್ಪಾಳ ತಂದೆ-ತಾಯಂದಿರಾದ ಭಟ್ ದಂಪತಿಗಳು ಉಪಸ್ಥಿತರಿದ್ದರು. ಕು|| ಶಿಲ್ಪಾಗೆ ಅಭಿನಂದನೆಗಳು.

ಗುರುವಾರ, ಜೂನ್ 2, 2011

ಬ್ರಹ್ಮೋಪದೇಶ

ಚಿ|| ಮನ್ವಿತ್(ಶ್ರೀಮತಿ ವನಿತಾ ಮತ್ತು ಶ್ರೀ ಮೋಹನ ಪ್ರಭು ಕಾರ್ಕಳ ಇವರ ಮಗ) ಇವನಿಗೆ 03-06-2011ರಂದು ಕಾರ್ಕಳದ ಶ್ರೀ ಮೂಡುಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮೋಪದೇಶ ದೀಕ್ಷೆ ನೀಡಲಾಯಿತು.

ಚಿ||ಅನಿರುದ್ಧ(ಶ್ರೀಮತಿ ಕೃಪಾ ಮತ್ತು ಶ್ರೀ ದಿನೇಶ ಜೆ. ಕಾಮತ್, ಹೆರವಟ್ಟಾ ಕುಮಟಾ ಇವರ ಮಗ) ನಿಗೆ ತಾ. 6-05-2011ರಂದು ಶ್ರೀ ವರದ ವಿಠ್ಠಲ ಸಭಾಗೃಹ, ಹೆರವಟ್ಟಾ ಇಲ್ಲಿ ಬ್ರಹ್ಮೋಪದೇಶ ದೀಕ್ಷೆ ನೀಡಲಾಯಿತು.