- ಕೊಂಕಣಿ ಅಕಾಡೆಮಿ : ಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನ
- ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ 2011ನೇ ಸಾಲಿನ 3 ಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
(1) ಕೊಂಕಣಿ ಭಾಷೆ ಮತ್ತು ಸಾಹಿತ್ಯ (2) ಕೊಂಕಣಿ ಕಲೆ (3) ಕೊಂಕಣಿ ಜಾನಪದ ಎಂಬ ಮೂರು ಕ್ಷೇತ್ರಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಮೂರು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಕೊಂಕಣಿ ಜನರು ವ್ಯಕ್ತಿ ವಿವರಗಳನ್ನು ದಾಖಲೆಗಳೊಂದಿಗೆ ಸ್ವತಧಿಧಿಃ ಕಳುಹಿಸಬಹುದು ಅಥವಾ ಇತರರನ್ನು ಶಿಫಾರಸು ಮಾಡಬಹುದು.
1. ಸಾಹಿತ್ಯ ಕ್ಷೇತ್ರದಲ್ಲಿ ಕಥೆ/ಕಾದಂಬರಿ/ಕವನ/ ಲೇಖನ ಮಾತ್ರವಲ್ಲದೆ ಸಂಶೋಧಕರು/ ಅಧ್ಯಯನಕಾರರ ಸಹಿತ ಅನನ್ಯ ಸೇವೆ ಸಲ್ಲಿಸಿದ ಮಹನೀಯರನ್ನು ಆಯ್ಕೆ ಮಾಡಿ ಗೌರವಿಸಲಾಗುವುದು.
2. ಕಲಾ ಕ್ಷೇತ್ರದಲ್ಲಿ ಕೊಂಕಣಿ ನಾಟಕ/ ಸಂಗೀತದಲ್ಲಿ ಹೆಚ್ಚಿನ ಸಾಧನೆ ಮಾಡಿದ ಹಿರಿಯರಲ್ಲಿ ಒಬ್ಬರನ್ನು ಗುರುತಿಸಿ (ಒಂದು ಕ್ಷೇತ್ರಕ್ಕೆ ಮಾತ್ರ) ಗೌರವ ಪ್ರಶಸ್ತಿ ನೀಡಲಾಗುವುದು.
3. ಕೊಂಕಣಿ ಜಾನಪದ ಕ್ಷೇತ್ರದಲ್ಲಿ ಜಾನಪದ ನೃತ್ಯ/ಹಾಡು/ಕುಣಿತ ಇತ್ಯಾದಿಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಮಹನೀಯರಲ್ಲಿ ಒಬ್ಬರನ್ನು ಗುರುತಿಸಿ ಗೌರವಿಸಲಾಗುವುದು.
ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಮಾ. 31 ಕೊನೆಯ ದಿನಾಂಕ. ಅರ್ಜಿಯಲ್ಲಿ ಅಭ್ಯರ್ಥಿಗಳ ಸಂಪೂರ್ಣ ವ್ಯಕ್ತಿ ಪರಿಚಯ, ಅವರು ಈ ವರೆಗೆ ಮಾಡಿರುವ ಸಾಧನೆಯ ಮಾಹಿತಿ, ಇತ್ತೀಚಿನ ಭಾವಚಿತ್ರದೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ಬಾಗ್, ಮಂಗಳೂರು - 3 ಇವರಿಗೆ ಕಳುಹಿಸಿಕೊಡಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಅಕಾಡೆಮಿ ಕಚೇರಿ (0824- 2453167) ಸಂಪರ್ಕಿಸಬಹುದು.
Saraswati Prabha Konkani Monthly Argodu Prakashana, L.I.G. - 51, Navanagar, Hubli - 580025. e-mail : saraswatiprabha@rediffmail.com Editor : Argodu Suresh Shenoy blog : http://saraswatiprabhakonkanimonthly.com and : http://gsbkonkaniabhimanisaraswatiprabha.com
ಶನಿವಾರ, ಮಾರ್ಚ್ 24, 2012
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ