ಶನಿವಾರ, ಆಗಸ್ಟ್ 13, 2011

ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾಗಿ
 ಶ್ರೀ ಚಂದ್ರಕಾಂತ ಗಣಪತಿ ಕಾಮತ್ 
     ಹೊಸಪೇಟೆಯ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರನ್ನಾಗಿ ಶ್ರೀ ಚಂದ್ರಕಾಂತ ಗಣಪತಿ ಕಾಮತ್ ಸೇರಿ ನಾಲ್ವರು ಸದಸ್ಯರನ್ನು ನೇಮಕ ಮಾಡಿ ಕರ್ನಾಟಕ ಸರಕಾರವು ಇತ್ತೀಚೆಗೆ ಆದೇಶ ಹೊರಡಿಸಿದೆ. ಶ್ರೀ ರಾಜಶೇಖರ,ಶ್ರೀ ಬಿ. ಹನುಮೇಶ್, ಶ್ರೀಮತಿ ವಿಜಯಲಕ್ಷ್ಮೀ ಇವರು ಶ್ರೀ ಕಾಮತರೊಂದಿಗೆ ನೇಮಕಗೊಂಡ ಇತರ ಮೂವರು ಸದಸ್ಯರಾಗಿದ್ದಾರೆ.
   ಹೊಸಪೇಟೆಯ ಗಣ್ಯ ಜಿ.ಎಸ್.ಬಿ. ಬಾಂಧವರಲ್ಲಿ ಒಬ್ಬರಾಗಿರುವ ಶ್ರೀ ಚಂದ್ರಕಾಂತ ಕಾಮತ್ ರವರು ಶ್ರೀ ದುರ್ಗಾರೋಡ್ ಲೈನ್ಸ್ ಇದರ ಮಾಲೀಕರಾಗುರುವ ಶ್ರೀ ವೈ. ಗಣಪತಿ ಕಾಮತ್ ಇವರ ಸುಪುತ್ರರಾಗಿದ್ದು ತಂದೆಯವರ ವೈತ್ತಿಯನ್ನೇ ಮುಂದುವರಿಸಿಕೊಂಡು ಹೋಗುವುರೊಂದಿಗೆ ಶೈಕ್ಷಣಿಕ ಸಂಸ್ಥೆಯನ್ನೂ ಕಟ್ಟಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಉದ್ಯಮ, ಸೇವೆಯೊಂದಿಗೆ ಕಲೆಯಲ್ಲಿಯೂ ಅಭಿರುಚಿ ಇಟ್ಟುಕೊಂಡಿರುವ ಶ್ರೀ ಚಂದ್ರಕಾಂತರವರು ``ಶ್ರೀ ಗುರುರಾಘವೇಂದ್ರ ವೈಭವ'' ಟಿ.ವಿ. ಧಾರವಾಹಿಯಲ್ಲಯೂ ಗಮನಾರ್ಹ ಪಾತ್ರವನ್ನು ಮಾಡಿ ಸೈ ಅನಿಸಿಕೊಂಡಿದ್ದಾರೆ. ಅದರೊಂದಿಗೆ ಹಲವಾರು ಇತರ ಟೆಲಿಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

     ಹಲವಾರು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿಯೂ ಸೇವಾನಿರತರಾಗಿರುವ ಇವರು ಇದೀಗ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿರುವುದು ಹರ್ಷದಾಯಕ ವಿಷಯ. ಮುಂದಿನ ದಿನಗಳಲ್ಲಿ  ಇವರಿಂದ ಜನಸಾಮಾನ್ಯರಿಗೆ ಇನ್ನೂ ಅಧಿಕ ಸೇವೆ ದೊರಕಲಿ,, ಮುಂದೆ ಇವರ ಸೇವಾಕ್ಷೇತ್ರ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಪಸರಿಸಲಿ ಎಂದು ``ಸರಸ್ವತಿ ಪ್ರಭಾ''ವು ತನ್ನೆಲ್ಲಾ ವಾಚಕರ ಪರವಾಗಿ ಶುಭ ಹಾರೈಸುತ್ತದೆ. ಇವರೊಂ ದಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡಿರುವ ಇತರರಿಗೂ ನಮ್ಮ ಅಭಿನಂದನೆಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ