Saraswati Prabha Konkani Monthly Argodu Prakashana, L.I.G. - 51, Navanagar, Hubli - 580025. e-mail : saraswatiprabha@rediffmail.com Editor : Argodu Suresh Shenoy blog : http://saraswatiprabhakonkanimonthly.com and : http://gsbkonkaniabhimanisaraswatiprabha.com
ಬುಧವಾರ, ಜುಲೈ 27, 2011
ಶುಕ್ರವಾರ, ಜುಲೈ 22, 2011
ಗೌಡ ಸಾರಸ್ವತ ಬ್ರಾಹ್ಮಣ ಸಮಾಜ, ಧಾರವಾಡ
1. 71ನೇ ವಾರ್ಷಿಕ ಸರ್ವ ಸಾಧಾರಣ ಸಭಾ :
ಧಾರವಾಡ ಸಮಾಜದ 2010-11ನೇ ಸಾಲಿನ 71ನೇ ವಾರ್ಷಿಕ ಷರ್ವ ಸಾಧಾರಣ ಸಭೆಯು ತಾ. 07-08-2011ರಂದು ರವಿವಾರ ಬೆಳಿಗ್ಗೆ 11 ಗಂಟೆಗೆ ಸಮಾಜದ ಸಭಾಗೃಹ ``ಸರಸ್ವತಿ ನಿಕೇತನ''ದಲ್ಲಿ ಜರುಗಲಿದೆ. ಸ್ವಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗ ಬೇಕಾಗಿ ವಿನಂತಿ ಇದೆ.
2. ಶ್ರೀ ವರಮಹಾಲಕ್ಷ್ಮೀ ವೃತ :
ಪ್ರತಿ ವರ್ಷದಂತೆ ಶ್ರೀ ವರಮಹಾಲಕ್ಷ್ಮೀ ವೃತವನ್ನು ತಾ. 12-08-2011ರಂದು ಶುಕ್ರವಾರ ಸಂಜೆ 5ಕ್ಕೆ ಆಚರಿಸಲಾಗುವದು.
3. ಋಗುಪಾಕರ್ಮ ಹೋಮ:
ಋಗುಪಾಕರ್ಮಹೋಮ, ಯಜ್ಞೋಪವೀತ ಧಾರಣೆಯನ್ನು ಸಮಾಜ ಮಂದಿರದಲ್ಲಿ ತಾ. 13-08-2011ರಂದು ಬೆಳಿಗ್ಗೆ 6-30ಕ್ಕೆ ಆಯೋಜಿಸಲಾಗಿದೆ. ಹೋಮದಲ್ಲಿ ಭಾಗವಹಿಸುವವರು ಸ್ವಲ್ಪ ಅಕ್ಕಿ, ಹಣ್ಣುಕಾಯಿ ತರಬೇಕು.
4. ಸ್ವಾತಂತ್ರ್ಯ ದಿನಾಚರಣೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ
ವೃತ ಪೂಜೆ :
ಸಮಾಜದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ತಾ. 15-08-2011ರಂದು ಧ್ವಜಾರೋಹಣ, ಸಿಹಿತಿಂಡಿ ವಿತಕಣೆಯೊಂದಿಗೆ ಬೆಳಿಗ್ಗೆ 9-30ಕ್ಕೆ ಆಚರಿಸಲಾಗುವದು. ಮತ್ತು ಅದೇ ದಿನ 10ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಪೂಜಾ ಜರುಗಲಿದೆ. ಈ ಸಂದರ್ಭದಲ್ಲಿ ಹತ್ತುಸಮಸ್ತರ ಪ್ರಾರ್ಥನೆ, 108 ಕಲಶ ಪೂಜಾ, ನೈವೇಧ್ಯ, ಮಂಗಳಾರತಿ, ಪ್ರಸಾದ ವಿತರಣೆ, ಸಮಾರಾಧನೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.
5. ಶ್ರೀ ಕೃಷ್ಣ ಜನ್ಮಾಷ್ಟಮಿ
ದಿನಾಂಕ. 21-08-2011ರಂದು ಸಂಜೆ 6-30ಕ್ಕೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪೂಜೆಯು ಆರಂಭವಾಗಲಿದೆ. ಭಾಗವಹಿಸುವವರು ತುಳಸೀದಳ, ಹಣ್ಣುಕಾಯಿ, ನೈವೇದ್ಯ ತರಬೇಕು.
6. ಚೂಡಿವಿನಿಮಯ, ಅರಶಿಣ-ಕುಂಕುಮ
ತಾ. 28-08-2011ರಂದು ಮಹಿಳೆಯರಿಗಾಗಿ ಅರಶಿಣ-ಕುಂಕುಮ ಕಾರ್ಯಕ್ರಮ ``ಚೂಡಿ'' ವಿನಿಮಯ ಮತ್ತು ಚೂಡಿ ಸ್ಪರ್ಧೆ ನೆಡೆಯಲಿದೆ.
ಸಮಾಜದ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಧಾರವಾಡದ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿ ಇದೆ.
ಹೆಚ್ಚಿನ ಮಾಹಿತಿಗಾಗಿ ಸಮಾಜದ ಕಛೇರಿ (ಸರಸ್ವತಿ ನಿಕೇತನ)
ಪೋನ್ ನಂ. 0836-2440230 ಇಲ್ಲಿಗೆ ಸಂಪರ್ಕಿಸಿರಿ
ಮಂಗಳವಾರ, ಜುಲೈ 12, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)